Saturday, November 28, 2020

ಚಂದ್ರಗ್ರಹದಶಾಭುಕ್ತಿಫಲಗಳು.

 

ಚಂದ್ರದಶಾ ಚಂದ್ರಭುಕ್ತಿ (೦-೧೦-೦)

ವಿದ್ಯಾಸ್ತ್ರೀಗೀತವಾದ್ಯೇಷ್ವಭಿರತಿಶಮನಂ ಪಟ್ಟವಸ್ತ್ರಾದಿಸಿದ್ಧಿಂ 

ಸತ್ಸಂಗಂ ದೇಹಸೌಖ್ಯಂ ನೃಪಸಚಿವಚಮೂನಾಯಕೈ:ಪೂಜ್ಯಮಾನಮ್ । 

ಸತ್ಕೀರ್ತಿಂ ತೀರ್ಥಯಾತ್ರಾಂ ವಿತರತಿ ಹಿಮಗುಃ ಪುತ್ರಮಿತ್ರೈ: ಪ್ರಿಯಂ ಚ

ಕ್ಷೋಣೀಗೋವಾಜಿಲಾಭಂ ಬಹುಜನವಿಭವಂ ಸ್ವೇದಶಾಂತರ್ವಿಪಾಕೇ।।

ಚಂದ್ರದಶಾ ಚಂದ್ರಭುಕ್ತಿಯಲ್ಲಿ ವಿದ್ಯಾಲಾಭ, ಸುಖ, ವಾದ್ಯಸಂಗೀತಾದಿ ಪ್ರೀತಿ, ಶಾಂತಿ, ವಿವಿಧ ಪಟ್ಟೆವಸ್ತ್ರಾದಿ ಲಾಭ, ಸಜ್ಜನಸಂಗ, ದೇಹಸುಖ, ರಾಜಮಂತ್ರಿ ಸೇನಾಧಿಪರಿಂದ ಸಂಪೂಜನೆ, ಸತ್ಕೀರ್ತಿ,ತೀರ್ಥಯಾತ್ರೆ , ಪುತ್ರಮಿತ್ರಾದಿಗಳಿಂದ ಪ್ರೀತಿ, ಭೂಮಿ, ಪಶು, ಕುದುರೆ ಇವುಗಳ ಲಾಭ, ಬಹುಜನ ಸನ್ಮಾನ, ಧನವೈಭವ ಇತ್ಯಾದಿ ಫಲವು. ಜಾ.ಪಾ.(ಫ.ದೀ – ಬ್ರಾಹ್ಮಣ ಸನ್ಮಾನ, ತಾಯಿಯಿಂದ ಸುಖ, ಸ್ತ್ರೀಜನಸುಖ, ಪ್ರಜಾ ಲಾಭಫಲವು. ಬೃ.ಪಾ. - ಚಂದ್ರನು ಉಚ್ಚ ಸ್ವಕ್ಷೇತ್ರಾದಿ ಇಷ್ಟಸ್ಥಾನಗಳಲ್ಲಿ ಕೇಂದ್ರ ತ್ರಿಕೋಣಾದಿ ಇಷ್ಟಭಾವಸ್ಥಿತಿ, ೯-೧೦ ಭಾವೇಶರ ಯುತಿ, ಹೀಗೆ ಪೂರ್ಣನಾಗಿಯೂ ಇದ್ದರೆ ರಾಜ್ಯಲಾಭ, ಪರಮಸುಖ, ಭಜನೆ, ಸತ್ಕೀರ್ತಿ, ಸೇನಾಪತಿತ್ವ , ದೇವತಾಭಕ್ತಿ , ಗುರುಭಕ್ತಿ , ಆನೆಕುದುರೆವಸ್ತ್ರಾದಿ ಸರ್ವಸಿದ್ದಿ ಸುಖಫಲವು. ಬಲಹೀನನಾಗಿ ಚಂದ್ರನು ಕ್ಷೀಣನಾಗಿ ಪಾಪಯುತನಾಗಿ ನೀಚಾದಿಯಲ್ಲಿ ೬-೧೨ರಲ್ಲೂ ಇದ್ದರೆ - ಧನಸ್ಥಾನಾದಿ ನಾಶ, ದೇಹಾಲಸ್ಯ , ಮನಸ್ತಾಪ, ರಾಜ ಮಂತ್ರಿ ವಿರೋಧ, ತಾಯಿಗೆ ಅರಿಷ್ಟ , ಬಂಧನ, ಮನೋದುಖ, ಬಂಧುನಾಶಫಲವು. ೮-೧೨ರ ಅಧಿಪರೊಡಗೂಡಿಯೋ ೨-೭ರ ಅಧಿಪನೋ ಆಗಿದ್ದರೆ - ರೋಗ, ಅಪಮೃತ್ಯುಭಯವು.) ಇದರಲ್ಲಿ ಕಷ್ಟಪರಿಹಾರಕ್ಕೆ- ದೇವೀ ಆರಾಧನೆ ಸುಪ್ತಶತೀ, ಚಂದ್ರಗ್ರಹ ಜಪ, ಪೂಜಾ, ಹೋಮ, ಮೃತ್ಯುಂಜಯ ಜಪ,ಪೂಜಾ,ಹೋಮ. ಚಂಡಿಕಾಪಾರಾಯಣ, ಲಲಿತಾರ್ಚನೆ, ದೀಪನಮಸ್ಕಾರ, ಕುಲದೇವತಾ ಸಂದರ್ಶನ ಇತ್ಯಾದಿ. ಲಕ್ಷ್ಮೀಹೃದಯ ಮಂತ್ರ ಹೋಮ.ಚಂದ್ರದಶಾ ಕುಜಭುಕ್ತಿ (೦-೭-೦)

ರೋಗಂ ವಿರೋಧಬುದ್ಧಿಂ ಚ ಸ್ಥಾನನಾಶಂ ಧನಕ್ಷಯಮ್ । 

ಮಿತ್ರಭ್ರಾತೃವಶಾತ್ ಕ್ಲೇಶಂ ಚಂದ್ರಸ್ಯಾಂತರ್ಗತೇ ಕುಜೇ ।।

ಚಂದ್ರದಶಾ ಕುಜಭುಕ್ತಿಯಲ್ಲಿ - ರೋಗ, ವಿರೋಧ, ಬುದ್ಧಿನಾಶ, ಸ್ಥಾನನಷ್ಟ (ಗೃಹ, ಅಧಿಕಾರ, ಭೂಮಿ), ಧನವ್ಯಯ, ಮಿತ್ರರಿಂದ ಸಹೋದರರಿಂದ ದು:ಖ ಇತ್ಯಾದಿ ಫಲವು. ಜಾ.ಪಾ. ( ಫ.ದೀ. - ಪಿತ್ತ ಉಷ್ಣ ಅಗ್ನಿ ರಕ್ತ ಇವುಗಳಿಂದ ರೋಗ, ಶತ್ರುಚೋರಾದಿ ಭಯ, ವ್ಯಸನ, ದುಃಖ, ಧನಹಾನಿ, ಮಾನಹಾನಿಯು. ಬೃ ಪಾ - ಬಲಿಷ್ಠ ಕುಜನು ಲಗ್ನಾತ್ಕೇಂದ್ರ ತ್ರಿಕೋಣಗಳಲ್ಲಿದ್ದರೆ - ಸಂಪತ್ಸೌಭಾಗ್ಯಾದಿವೃದ್ಧಿ , ರಾಜಸನ್ಮಾನ, ವಸ್ತ್ರಾಭರಣ ಭೂಷಣಾದಿ ಲಾಭ, ಯತ್ನಕಾರ್ಯ ಸಿದ್ದಿ , ಗೃಹ, ಕೃಷಿಕ್ಷೇತ್ರಾದಿ ವೃದ್ಧಿ , ವ್ಯಾಪಾರ ಜಯಾದಿ ಫಲವು. ಉಚ್ಚ ಸ್ವಕ್ಷೇತ್ರಗಳಲ್ಲೂ ಇದ್ದರೆ– ಮಹಾಸೌಖ್ಯ , ಸರ್ವಸಿದ್ಧಿಯು. ಪಾಪಯುತ ಕುಜನು ೮-೧೨ರಲ್ಲಿದ್ದು ಚಂದ್ರನಿಂದಲೂ ಕೆಟ್ಟ ಸ್ಥಾನದಲ್ಲಿದ್ದರೆ ರೋಗಪೀಡೆ, ಗೃಹಹಾನಿ, ಕೃಷಿಹಾನಿ, ವ್ಯಾಪಾರನಷ್ಟ , ಕೆಲಸದವರಲ್ಲಿ ಕಲಹ, ನಿತ್ಯನಿಷ್ಠುರ ಮಾತು, ಹಾನಿ ಇತ್ಯಾದಿ. ೨-೭-೮ರ ಅಧಿಪನಾಗಿ ೮ ರಲ್ಲಿದ್ದರೆ- ಮಹಾ ಅನಿಷ್ಟದಾಯಕನು. ಅವಗಡಾದಿ ಸೂಚಕನು.) ಭುಕ್ತಿದೋಷ ಪರಿಹಾರಕ್ಕೆ- ಸಪ್ತಶತೀ ಪಾರಾಯಣ, ಚಂಡಿಕಾಹವನ, ದುರ್ಗಾಹೋಮವು, ತೊಗರಿದಾನ, ಅಂಗಾರಕಗ್ರಹ ಜಪ,ಪೂಜಾ,ಹವನ ಇತ್ಯಾದಿ ಪ್ರಾಯಶ್ಚಿತ್ತದಿಂದ ದೋಷಪರಿಹಾರವೆಂದಿದ್ದಾರೆ.ಚಂದ್ರದಶಾ ರಾಹುಭುಕ್ತಿ (೧-೬-೦)

ರಿಪುರೋಗಭಯಾತ್ ಕ್ಲೇಶಂ ಬಂಧುನಾಶಂ ಧನಕ್ಷಯಮ್ । 

ನ ಕಿಂಚಿತ್ಸುಖಮಾಪ್ನೋತಿ ರಾಹೌ ಚಂದ್ರದಶಾಂತರೇ ।।

ಚಂದ್ರದಶಾ ರಾಹುಭುಕ್ತಿಯಲ್ಲಿ - ಶತ್ರುಭಯ, ರೋಗಪೀಡೆ, ದು:ಖ, ಬಂಧುನಾಶ, ಧನಹಾನಿ, ಸ್ವಲ್ಪವೂ ಸುಖವಿಲ್ಲದವನಾಗುತ್ತಾನೆ. ಜಾ.ಪಾ. (ಫ ದೀ- ವಾತರೋಗ, ಅನ್ನಪಾನಾದಿ ದೋಷದಿಂದ ಜ್ವರಾದಿ ಪೀಡೆ, ಶತ್ರುವೃದ್ಧ್ಯಾದಿ ಮಹಾ ದೋಷವು.) ಬೃ.ಪ.- ರಾಹು ಕೇಂದ್ರ ತ್ರಿಕೋಣಗಳಲ್ಲಿದ್ದರೆ- ಭುಕ್ತಿ ಆರಂಭದಲ್ಲಿ ಸುಖ ಸಿಕ್ಕಿದರೂ ಆಮೇಲೆ ಶತ್ರು , ಚೋರ, ಸರ್ಪ, ಪಶು, ಇತ್ಯಾದಿಯಿಂದ ಬಹುವಿಧದ ಆಪತ್ತು , ರಾಜಭಯ, ಬಂಧುಮಿತ್ರಾದಿ ನಾಶ, ಮಾನಹಾನಿ, ಮನೋವ್ಯಥೆ ಇತ್ಯಾದಿ. ರಾಹು - ೩-೬-೧೦-೧೧ರಲ್ಲಿ ಶುಭಯುತಿ ದೃಷ್ಟಿಯಲ್ಲಿದ್ದರೆ- ಯೋಗಕಾರಕನ ಸಂಬಂಧವಿದ್ದರೆ- ಸರ್ವಕಾರ್ಯ ಸಿದ್ಧಿ , ನೈಋತ್ಯ ಪಶ್ಚಿಮಭಾಗದಿಂದ ರಾಜ ಸನ್ಮಾನ, ವಾಹನಲಾಭ, ವಸ್ತ್ರಾದಿ ಭೂಷಣ ಪ್ರಾಪ್ತಿ , ಇಷ್ಟಕಾರ್ಯ ಸಿದ್ಧಿಯು. ಬಲಹೀನ ರಾಹು ಚಂದ್ರಾತ್  ೮-೧೨ರಲ್ಲಿದ್ದರೆ - ಸ್ಥಾನಭ್ರಂಶ, ಮನೋದು:ಖ, ಪುತ್ರದು:ಖ, ಮಹಾಭಯ, ಪತ್ನಿ ಪೀಡೆ, ರೋಗಪೀಡೆ, ಹಾವು ಚೇಳು ಮುಂತಾದ ಜಂತುಭಯ, ರಾಜಚೋರಾದಿ ಭೀತಿ, ಇತ್ಯಾದಿ. ಚಂದ್ರನ ಕೇಂದ್ರ ತ್ರಿಕೋಣ ೩-೧೧ರಲ್ಲಿ ರಾಹುವಿದ್ದರೆ - ತೀರ್ಥಯಾತ್ರೆ ಪುಣ್ಯಸಂಚಯ, ದೇವತಾ ಸಂದರ್ಶನ, ಧರ್ಮಪ್ರವೃತ್ತಿ ಇತ್ಯಾದಿ. ಬಲಹೀನ ರಾಹು ೨-೭ ರಲ್ಲಿದ್ದರೆ- ಭುಕ್ತಿಕಾಲದಲ್ಲಿ ದೇಹಾಪತ್ತು ಇದೆ. ದೋಷ ಪರಿಹಾರಕ್ಕೆ ನಾಗಪೂಜೆ ರಾಹುಜಪ,ಹೋಮ,ಸುವರ್ಣದಾನ, ಶತರುದ್ರಜಪಾಭಿಷೇಕ,ರುದ್ರಹೋಮ ಇತ್ಯಾದಿಯಿಂದ ದೋಷ ಪರಿಹಾರವು. ಚಂದ್ರದಶಾ ಗುರುಭುಕ್ತಿ (೧-೪-೦)

ಯಾನಾದಿವಿವಿಧಾರ್ಥಾಪ್ತಿಂ  ವಸ್ತ್ರಾಭರಣಸಂಪದಃ । ಯತ್ನಾತ್ಕಾರ್ಯಮವಾಪ್ನೋತಿ ಜೀವೇ ಚಂದ್ರದಶಾಂತರೇ ।।

ಚಂದ್ರದಶಾ ಗುರುಭುಕ್ತಿಯಲ್ಲಿ ವಿವಿಧ ರೀತಿಯಿಂದ ಅರ್ಥಲಾಭ, ವಾಹನಲಾಭ, ವಸ್ತ್ರಾಭರಣಾದಿ ಸಂಪತ್ಸಮೃದ್ಧಿ , ಯತ್ನ ಕಾರ್ಯ ಜಯ, ಜಾ.ಪಾ (ಫ.ದೀ – ದಾನಧರ್ಮ ಪ್ರವೃತ್ತಿ , ಸೌಖ್ಯ , ಭೂಷಣ, ಲಾಭ, ರಾಜಸನ್ಮಾನಫಲ),ಬೃ.ಪಾ – ಗುರುವು ಲಗ್ನಾತ್ಕೇಂದ್ರ ತ್ರಿಕೋಣ ಸ್ವಕ್ಷೇತ್ರ ಉಚ್ಚ ಲಾಭ ಇತ್ಯಾದಿ ರೀತಿಯಲ್ಲಿದ್ದರೆ- ಚಂದ್ರನಿಂದ ಇಷ್ಟಸ್ಥಾನದಲ್ಲೂ ಇದ್ದರೆ- ರಾಜ್ಯ ಲಾಭ, ನಿತ್ಯೋತ್ಸವ, ರಾಜಮೂಲಾದ್ಧನಾಗಮ, ಇಷ್ಟದೇವತಾನುಗ್ರಹ, ಸಂತಾನಸುಖ, ನಿತ್ಯ ಲಕ್ಷ್ಮೀಕಟಾಕ್ಷ ವೃದ್ಧಿ , ಮನೆಯಲ್ಲಿ ನಿತ್ಯೋತ್ಸವವು, ಭೂಮ್ಯಾದಿ ಸರ್ವ ವಿಧದ ಲಾಭ, ಗುರುವು ನೀಚಾಸ್ತಾದಿಯುತನಾಗಿ ೬-೮-೧೨ರಲ್ಲಿದ್ದು ಚಂದ್ರನಿಂದಲೂ ಅನಿಷ್ಟ ಸ್ಥಾನದಲ್ಲಿದ್ದರೆ- ಅಶುಭ ದರ್ಶನ, ಗುರುಜನ ಹಾನಿ, ಪುತ್ರಹಾನಿ, ಸ್ಥಾನಭ್ರಂಶ, ಮನೋದುಃಖ, ಅಕಸ್ಮಾತ್ಕಲಹ, ವಾಹನ, ಮನೆ, ಭೂಮ್ಯಾದಿ ನಾಶ. ಚಂದ್ರನಿಂದ ಗುರುವು ಕೇಂದ್ರತ್ರಿಕೋಣ ಲಾಭ ತೃತೀಯದಲ್ಲಿದ್ದರೆ- ಸರ್ವಸುಖ, ಸಂಪತ್ತು , ಧೈರ್ಯ, ಲಾಭ, ಪರಾಕ್ರಮ, ಯಜ್ಞ , ವ್ರತ, ವಿವಾಹ, ರಾಜ್ಯಶ್ರೀ ಸಿದ್ಧ್ಯಾದಿ ಫಲವು. ಚಂದ್ರನು ೬-೮-೧೨ರಲ್ಲಿದ್ದರೆ- ಬಲಹೀನ ಗುರುವಾಗಿದ್ದರೆ ಕೆಟ್ಟ ಸಂತಾನ, ಕೆಟ್ಟ ಭೋಜನ, ವಿದೇಶ ಸಂಚಾರ. ೨-೭ರ ಅಧಿಪನು ಗುರುವಾಗಿದ್ದರೆ- ಅಪಮೃತ್ಯು ಭಯವು. ಪರಿಹಾರಕ್ಕೆ - ಶಿವಸಹಸ್ರನಾಮ, ವಿಷ್ಣುಸಹಸ್ರನಾಮ ವೇದಾದಿ ಪಾರಾಯಣ, ಗುರುಜಪ, ವಿಷ್ಣುಪ್ರಾರ್ಥನೆ, ಸುವರ್ಣದಾನ ಇತ್ಯಾದಿಯು. ಒಬ್ಬರು ವೈಷ್ಣವ ಮಂತ್ರ ಹೋಮವೆಂದಿದ್ದಾರೆ.


ಚಂದ್ರದಶಾ ಶನಿಭುಕ್ತಿ (೧-೭-೦)

ಮಾತೃಪೀಡಾ ಮನೋದುಃಖಂ ವಾತಪೈತ್ಯಾದಿಪೀಡನಮ್ । ಸ್ತಬ್ಧವಾಗರಿಸಂವಾದಂ ಶನೌ ಚಂದ್ರದಶಾಂತರೇ ।।

ಚಂದ್ರದಶಾ ಶನಿಭುಕ್ತಿಯಲ್ಲಿ ತಾಯಿಗೆ ಕಷ್ಟ , ಮನೋದು:ಖ, ವಾತಪಿತ್ತ ದೋಷದಿಂದ ದೇಹ ಪೀಡೆ, ವಾಗ್ಬಂಧನ, ಶತ್ರುಕಲಹ ಜಾ.ಪಾ (ಫ.ದೀ – ವಿವಿಧ ರೋಗಗಳು, ದು:ಖಗಳು, ಬಂಧುಪುತ್ರ ಭಾರ್ಯಾದಿ ಪೀಡೆ, ದೊಡ್ಡದೊಡ್ಡ ವ್ಯಸನಕಾರಕ ಪ್ರಸಂಗಗಳು, ಮರಣಭಯಾದಿ ಫಲ.) ಬೃ.ಪಾ - ಶನಿಯು ಸ್ವ - ಉಚ್ಚ , ಸ್ವಾಂಶ, ಕೇಂದ್ರ , ತ್ರಿಕೋಣ, ಲಾಭ, ಶುಭಯುತಿದೃಷ್ಟಿ , ಇತ್ಯಾದಿಯಲ್ಲಿದ್ದರೆ- ಶೂದ್ರ ಪ್ರಭು, ಸಂಪಲ್ಲಾಭ, ಪುತ್ರಮಿತ್ರ ಅರ್ಥಾದಿಲಾಭ, ಕೃಷಿ ಆದಾಯ, ವ್ಯವಸಾಯ ಭೂಮ್ಯಾದಿ ವೃದ್ಧಿ , ರಾಜಾನುಗ್ರಹ, ವೈಭವ, ಕಲ್ಯಾಣ, ಪುತ್ರಲಾಭಾದಿ ಫಲವು. ಶನಿಯು ಬಲಹೀನನಾಗಿ ನೀಚಾದಿ ಸ್ಥಿತನಾಗಿ, -೬-೮-೧೨ರಲ್ಲಿದ್ದರೆ- ತೀರ್ಥಕ್ಷೇತ್ರಗಳ ಸಂಚಾರ ಅನೇಕ ಜನರಿಂದ ವಿವಿಧ ಕಷ್ಟ , ಶಸ್ತ್ರಭಯ, ಸರ್ವವಿಧದ ಆಪತ್ತು . ಚಂದ್ರನಿಂದ ಕೇಂದ್ರ ತ್ರಿಕೋಣಗಳಲ್ಲಿ ಶನಿ ಬಲಿಷ್ಠನಾಗಿದ್ದರೆ ಸ್ವಲ್ಪ ಧನಾದಿ ಸುಖವಿದ್ದರೂ ಮಡದಿ ಮಕ್ಕಳ ವಿರೋಧ ಬಂದೀತು. ೨-೮-೭ರಲ್ಲಿ ಶನಿ ಇದ್ದರೆ ದೇಹಾಪತ್ತು ಬರುವುದು, ದೋಷ ಪರಿಹಾರಕ್ಕೆ- ಮೃತ್ಯುಂಜಯ ಜಪ, ಶನಿಜಪ, ತ್ರಿಮೂರ್ತಿ ಪ್ರಾರ್ಥನೆ, ಗೋಸೇವೆ, ಕಪ್ಪುದನ ದಾನ, ಮೃತಸಂಜೀವಿನೀ ಜಪ ಇತ್ಯಾದಿ. 


ಚಂದ್ರದಶಾ ಬುಧಭುಕ್ತಿ (೧-೫-೦) 

ಮಾತೃವರ್ಗಾದ್ಧನಪ್ರಾಪ್ತಿಂ ವಿದ್ವಜ್ಜನಸಮಾಶ್ರಯಮ್। 

ವಸ್ತ್ರಭೂಷಣಸಂಪ್ರಾಪ್ತಿಂ ಬುಧೇ ಚಂದ್ರದಶಾಂತರೇ ।।

ಚಂದ್ರದಶಾ ಬುಧಭುಕ್ತಿಯಲ್ಲಿ ಮಾತೃವರ್ಗದಿಂದ ಧನಪ್ರಾಪ್ತಿ , ವಿದ್ವಾಂಸರಲ್ಲಿ ಬೆರೆಯುವಿಕೆ,ವಸ್ತಾಲಂಕಾರ ಆಭರಣಾದಿ ಪ್ರಾಪ್ತಿಫಲವು. ಜಾ.ಪಾ.(ಫ.ದೀ. - ಧನಲಾಭ ಹಸ್ತ್ಯಶ್ವಾದಿಪಶುಲಾಭ, ಸೌಖ್ಯ , ಸಂಪತ್ಸಮೃದ್ಧಿ , ಬುದ್ಧಿವಿಕಾಸಾದಿ ಫಲವು.) ಬೃ.ಪಾ.- ಬುಧನು ಲಗ್ನಾತ್ ಕೇಂದ್ರ ತ್ರಿಕೋಣ ಲಾಭಾದಿಗಳಲ್ಲಿ ಉಚ್ಚ ಸ್ವಮಿತ್ರ ಕ್ಷೇತ್ರ , ಅಂಶಾದಿಯುತನಾಗಿ ಬಲಿಷ್ಠನಿದ್ದರೆ ವಿದ್ಯಾವಿನೋದಾದಿ ಸಭಾರಂಜನೆ, ರಾಜಮಾನ್ಯತೆ (ರಾಜಸಮಾನರು), ಧನ, ಅಲಂಕಾರ, ಜ್ಞಾನ, ಸಂತಾನ, ಸತ್ಸಂಗ ವ್ಯಾಪಾರ, ವಾಹನ, ಗೃಹ, ಇತ್ಯಾದಿ ಲಾಭ ವೃದ್ಧಿಯು. ಚಂದ್ರನಿಂದ ಕೇಂದ್ರ , ತ್ರಿಕೋಣ ೧೧-೨ ಇವುಗಳಲ್ಲಿದ್ದರೆ ವಿವಾಹಸಿದ್ದಿ , ಯಜ್ಞದೀಕ್ಷೆ , ದಾನಧರ್ಮ, ಶುಭಪ್ರವೃತ್ತಿ , ವಿದ್ವಜ್ಜನಮನ್ನಣೆ, ಉನ್ನತ ವ್ಯಕ್ತಿಗಳ ಪ್ರೀತಿ, ಆರೋಗ್ಯ , ಸೋಮಪಾನಾದಿ ಶುಭವು. ಬುಧನು ನೀಚಾದಿ ಬಲಹೀನನಾಗಿ ಚಂದ್ರನಿಂದ ೬-೮-೧೨ರಲ್ಲಿದ್ದರೆ ದೇಹಪೀಡೆ, ಕೃಷಿ ಪಶು ಭೂಮ್ಯಾದಿ ನಷ್ಟ , ಮಡದಿ ಮಕ್ಕಳ ಪೀಡೆ, ಕಾರಾಗೃಹ ಬಂಧನ, ಯೋಗಾದಿಗಳು. ಬುಧನು ೨-೭ರ ಅಧಿಪನಾಗಿದ್ದರೆ- ಜ್ವರಪೀಡಾದಿ ಮಹಾ ಭಯ ಪ್ರಸಂಗಗಳು, ಭುಕ್ತಿದೋಷ ಪರಿಹಾರಕ್ಕೆ - ಸುವರ್ಣ ರಜತ ದಾನ, ಧನ್ವಂತರೀ ಜಪ, ಪೂಜಾ, ಹೋಮ, ಬುಧಗ್ರಹಜಪ,ಪೂಜಾ,ಹೋಮ,ಚಂಡಿಕಾ ಪಾರಾಯಣ,ಆಯುಷ್ಯಹೋಮ,ಉದಕಶಾಂತಿ ಪಾರಾಯಣ.ಚಂದ್ರದಶಾ ಕೇತುಭುಕ್ತಿ (೧-೭-೦)

ಸ್ತ್ರೀರೋಗಂ ಬಂಧುನಾಶಂ ಚ ಕುಕ್ಷಿರೋಗಾದಿಪೀಡನಮ್ । ದ್ರವ್ಯನಾಶಮವಾಪ್ನೋತಿ ಕೇತೌ‌ ಚಂದ್ರದಶಾಂತರೇ ।।

ಚಂದ್ರದಶಾ ಕೇತುಭುಕ್ತಿಯಲ್ಲಿ - ಸ್ತ್ರೀ ಮೂಲಾತ್ ರೋಗ, ಬಂಧುನಾಶ, ಉದರರೋಗ ದ್ರವ್ಯನಾಶಾದಿ ಫಲವು. ಜಾ.ಪಾ. (ಫ.ದೀ – ಮನಶ್ಚಂಚಲ, ಧನವ್ಯಯ, ಜಲಭಯ, ಭೃತ್ಯಜನನಾಶ, ದಾನಶೂನ್ಯತೆಯು. ಬೃ.ಪಾ - ಕೇತು ಬಲಯುತನಾಗಿ ಇಷ್ಟಭಾವದಲ್ಲಿದ್ದರೆ- ಧನಲಾಭ, ಮಹಾಸೌಖ್ಯ , ಸ್ತ್ರೀಪುತ್ರಾದಿ ಸುಖ, ಭುಕ್ತಿಯ ಆದಿಯಲ್ಲಿ ಧನಹಾನಿ, ಮಧ್ಯೆ ಸುಖ, ಅಂತ್ಯ ಕಷ್ಟ , ಚಂದ್ರನ ಕೇಂದ್ರ ತ್ರಿಕೋಣದಲ್ಲಿ ಕೇತುವಿದ್ದರೆ- ಸೌಖ್ಯ , ಧನವೃದ್ಧಿ , ಗೋಮಹಿಷ್ಯಾದಿ ಲಾಭವು. ಚಂದ್ರನ ೮-೧೨-೬ರಲ್ಲಿ ಕೇತುವು ಪಾಪಯುತಿ ದೃಷ್ಟಿಯಲ್ಲಿದ್ದರೆ- ಶತ್ರುಗಳಿಂದ ಕಾರ್ಯಹಾನಿ, ಅಕಸ್ಮಾತ್ ಕಲಹ, ೨-೭ರಲ್ಲಿ ಕೇತುವಿದ್ದರೆ - ರೋಗಾದ್ಯನರ್ಥಗಳಿಂದ ಮಹಾಭಯವು. ಪ್ರಾಯಶ್ಚಿತ್ತ - ಗಣಪತಿ ಪೂಜೆ, ಹೋಮ, ಕೇತುಜಪ, ನೀಚಾನ್ನದಾನವು, ದೇವೀಪೂಜೆ.ಚಂದ್ರದಶಾ ಶುಕ್ರಭುಕ್ತಿ (೧-೮-೦) 

ಸ್ತ್ರೀಧನಂ ಕೃಷಿಪಶ್ವಾದಿಜಲವಸ್ತ್ರಾಗಮಂ ಸುಖಮ್ ।

ಮಾತೃರೋಗಮವಾಪ್ನೋತಿ ಭೃಗೌ ಚಂದ್ರದಶಾಂತರೇ ।। 

ಚಂದ್ರದಶಾ ಶುಕ್ರಭುಕ್ತಿಯಲ್ಲಿ - ಸ್ತ್ರೀ ಮೂಲಾದ್ಧನ ಪ್ರಾಪ್ತಿ , ಕೃಷಿ, ಪಶು, ಜಲಾದಿಯಿಂದ ಲಾಭ, ವಸ್ತ್ರಾದಿ ಲಾಭ, ತಾಯಿಗೆ ರೋಗವು, ಜಾ.ಪಾ. (ಫ ದೀ - ನೌಕಾದಿಯಿಂದ ಲಾಭ, ಆಭರಣ, ಕೃಷಿ, ವ್ಯಾಪಾರಾದಿ ಲಾಭ, ಪುತ್ರಮಿತ್ರ ಪಶು ಧಾನ್ಯಾದಿ ವೃದ್ಧಿ.) ಬೃ.ಪಾ- ಬಲಿಷ್ಠ ಶುಕ್ರನು ಇಷ್ಟ ಸ್ಟಾನಸ್ಥಿತನಾಗಿದ್ದರೆ– ರಾಜಾಶ್ರಯ, ರಾಜ್ಯಲಾಭ, ವಾಹನ, ವಸ್ತ್ರ , ಅಲಂಕಾರ ಪ್ರಾಪ್ತಿ , ಪಶು, ವೃದ್ಧಿ , ಪಪುತ್ರಾದಿ ಸುಖ, ನೂತನ ಗೃಹ ನಿರ್ಮಾಣ, ಸುಗಂಧಪುಷ್ಪ ಮಾಲ್ಯಾದಿ ವೈಭವ, ಮೃಷ್ಟಾನ್ನಭೋಜನ, ಸ್ತ್ರೀಸುಖ, ಆರೋಗ್ಯ ಸಂಪದಭಿವೃದ್ಧಿಯು, ಚಂದ್ರ ಶುಕ್ರರು ಒಟ್ಟಿಗೆ ಇದ್ದರೆ ದೇಹಸುಖ, ಕೀರ್ತಿ ಸಂಪತ್ಸಮೃದ್ಧಿಯು, ಶುಕ್ರನು ನೀಚ ಅಸ್ತಾದಿ ಪಾಪಯುತಿದೃಷ್ಟನಾಗಿದ್ದರೆ- ಭೂಮಿ, ಸ್ತ್ರೀ , ಪುತ್ರ , ಭಾರ್ಯಾ, ಪಶು ಇತ್ಯಾದಿ ಹಾನಿ, ರಾಜವಿರೋಧವು. ದ್ವಿತೀಯದಲ್ಲಿ ಶುಕ್ರನು ಉಚ್ಛಾದಿ ಬಲಯುತನಿದ್ದರೆ- ನಿಧಿ ದ್ರವ್ಯ ಪ್ರಾಪ್ತಿ , ಭೂ, ಸಂತಾನ ಭಾಗ್ಯಾದಿ ವೃದ್ಧಿ . ದೇವ ಬ್ರಾಹ್ಮಣ ಭಕ್ತಿ , ಮುತ್ತುರತ್ನಾದಿ ಲಾಭ, ಚಂದ್ರನಿಂದ ೧೧ ರಲ್ಲಿ ಶುಕ್ರನಿದ್ದರೆ- ಕೇಂದ್ರ , ತ್ರಿಕೋಣದಲ್ಲಿ (ಚಂದ್ರನಿಂದ)ದ್ದರೆ- ಗೃಹ ಕ್ಷೇತ್ರಾದಿ ಸರ್ವಸಮೃದ್ಧಿ , ಮಹಾವೈಭವ ಜೀವನವು ಚಂದ್ರನಿಂದ ೬-೮-೧೨ರಲ್ಲಿ ಪಾಪಯುತಿ ದೃಷ್ಟಿಯಲ್ಲಿ ಶುಕ್ರನಿದ್ದರೆ - ವಿದೇಶವಾಸ, ದು:ಖ, ಚೋರಭಯ, ಮೃತ್ಯುಭಯ. ೨-೭ರ ಅಧಿಪನಾಗಿದ್ದರೆ ( ಶುಕ್ರನು ) ಅಪಮೃತ್ಯುಭಯವು. ಪ್ರಾಯಶ್ಚಿತ್ತ- ಶುಕ್ರಜಪ , ದುರ್ಗಾಹೋಮ, ಗೋದಾನ, ದೇವೀ ಆರಾಧನೆ, ಲಲಿತಾರಾಧನೆ, ಸಪ್ತಶತೀ, ಶ್ರೀಸೂಕ್ತ ಹೋಮ, ಸಪ್ತಶತೀ ಪಾರಾಯಣ,ಹವನ,ದೋಷದ ಪ್ರಾಬಲ್ಯ ದೌರ್ಬಲ್ಯ ನೋಡಿ ಪ್ರಾಯಶ್ಚಿತ್ತವು.ಚಂದ್ರದಶಾ ರವಿಭುಕ್ತಿ (೦-೬-೦)

ನೃಪಪ್ರಾಯಕಮೈಶ್ಚರ್ಯಂ ವ್ಯಾಧಿನಾಶಂ ರಿಪುಕ್ಷಯಮ್ । ಸೌಖ್ಯಂ ಶುಭಮವಾಪ್ನೋತಿ ರವೌ ಚಂದ್ರದಶಾಂತರೇ ।।

ಚಂದ್ರದಶಾ ರವಿಭುಕ್ತಿಯಲ್ಲಿ ರಾಜನಿಂದ (ಸಮಾನರಿಂದ) ಐಶ್ವರ್ಯ ಪ್ರಾಪ್ತಿ , ರೋಗ ನಾಶ, ಶತ್ರುಕ್ಷಯ ಸೌಖ್ಯ , ಶುಭಾದಿ ಫಲವು, ಚಾ.ಪಾ (ಫ.ದೀ– ರಾಜನ ಸಮಾನತೆ, ಶೂರತನ, ವಾತಪಿತ್ತ ರೋಗಾದಿ ಫಲ.) ಬೃ.ಪಾ – ರವಿ ಉಚ್ಚಾದಿ ಬಲಯುತನಾಗಿ ಕೇಂದ್ರ ತ್ರಿಕೋಣಾದಿ ಇಷ್ಟಸ್ಥಾನದಲ್ಲಿದ್ದರೆ - ೨-೩ರಲ್ಲೂ ಇದ್ದರೆ ನಷ್ಟವಾದ ರಾಜ್ಯ ಧನಾದಿ ಲಾಭ, ಮನೆಯಲ್ಲಿ ಕಲ್ಯಾಣೋತ್ಸವ, ಮಿತ್ರರಿಂದ ರಾಜಸಮಾನರಿಂದ ಭೂಮ್ಯಾದಿ ಲಭ, ಪತ್ನಿಗೆ ಗರ್ಭಾಧಾನ, ಸಂಪತ್ಸಮೃದ್ಧಿ. ಭುಕ್ತಿ ಅಂತ್ಯದಲ್ಲಿ ಜ್ವರಾದಿ ಪೀಡೆ, ರವಿಯು ಚಂದ್ರನಿಂದ ೮-೧೨ರಲ್ಲಿದ್ದರೆ- ಪಾಪಯುತನಾಗಿ ೨-೭ರ ಅಧಿಪನಾಗಿದ್ದರೆ-ರಾಜ ಚೋರ ರೋಗಾದಿ ಭಯ, ವಿದೇಶಗಮನ, ನಿಷ್ಫಲತೆ, ಕಷ್ಟಫಲ. ಪ್ರಾಯಶ್ಚಿತ್ತ- ಶಿವಪೂಜೆ, ಶತರುದ್ರಾಭಿಷೇಕ,ರುದ್ರಹೋಮ,ದುರ್ಗಾಪೂಜೆ,ಹೋಮ, ಸೂರ್ಯನಮಸ್ಕಾರ, ಆದಿತ್ಯ ಜಪ, ದೀಪನಮಸ್ಕಾರ, ಇತ್ಯಾದಿ ಪ್ರಾಯಶ್ಚಿತ್ತದಿಂದ ಭುಕ್ತಿದೋಷ ಪರಿಹಾರವು.


No comments:

Post a Comment