Friday, November 27, 2020

ಜ್ಯೌತಿಷವಿಷಯಗಳು


वाचं न:स दधात्वनेककिरणस्त्रैलोक्यदीपो रवि:॥

रवि:= ऋ गतौ (ಋ ಗತೌ)ಧಾತು ಉತ್ಪನ್ನ ಪದ. ये ये गत्यर्थका:ते ते ज्ञानार्थका: |ಇದು ವ್ಯಾಕರಣ ಸಾಮಾನ್ಯ ನಿಯಮ.ಗತಿ ಎಂಬ ಅರ್ಥ ಇರುವ ಧಾತುವಿಗೆ ಜ್ಞಾನ ಎಂಬ ಇನ್ನೊಂದು ಅರ್ಥವನ್ನು ಗ್ರಹಿಸಬೇಕು.ಆದ್ದರಿಂದ रवि ಗ್ರಹ ಜ್ಞಾನಕಾರಕ ಎಂದು.आरोग्यं भास्करात् इच्छेत्।, अर्को नाशयते व्याधीन्।, आरोग्यं पद्मबन्धु:। ರವಿ ಗ್ರಹ ಆರೋಗ್ಯಕಾರಕ ಗ್ರಹ ಎಂದೂ ಈ ಶಾಸ್ತ್ರಪದಗಳಿಂದ  ತಿಳಿಯುವುದು.सूर्य आत्मा जगतस्तस्थुषश्च।=सूञ् प्राणिगर्भविमोचने। ಅಂದರೆ ಜಗತ್ತಿನ ಎಲ್ಲಾ ಚರಾಚರಗಳಿಗೂ ಸೂರ್ಯ ಗ್ರಹನೇ ಆಧಾರ.ವಿಶ್ವದ ಆತ್ಮ ಸೂರ್ಯ ಎಂದು.ರವಿ ಗ್ರಹ ಪ್ರಧಾನವಾಗಿ ಇನ್ನೂ ಬಹಳ ವಿಷಯಗಳಿಗೆ ಕಾರಕ.ಇಂಥಹ ಗುಣಗಳುಳ್ಳ,ವಿಶೇಷವಾಗಿ ಜ್ಞಾನಕ್ಕೆ ಅಧಿಪತಿ ಆಗಿರುವ ರವಿಗ್ರಹನು ನಮಗೆ ಮಾತಾಡುವ ಶಕ್ತಿ ಕೊಡಲಿ.

ज्योतींषि अधिकृत्य कृतं शास्त्रम्=ज्योतिषशास्त्रम् अथवा ज्यौतिषशास्त्रम्।। शास्ति इति शास्त्रम्। तज्ञ:(तत् जानाति इति)ज्योतिषि: अथवा ज्यौतिषि:।

ಸೂರ್ಯ ಕಿರಣಗಳನ್ನು ,ಚಲನೆಯನ್ನು ಆಧರಿಸಿ ವಿರಚಿತವಾದದ್ದು ಜ್ಯೋತಿಷ ಶಾಸ್ತ್ರ. ಯಾವುದು ಹೀಗೆ ಇರಬೇಕು ಇರಬಾರದು ಎಂದು ಶಾಸನ ಮಾಡುತ್ತದೆಯೋ  ಅದು ಶಾಸ್ತ್ರ.शास्ति (शासु अनुशिष्टौ)इति शास्त्रम्।


आरोग्यं पद्मबन्धुर्वितरतु विपुलां सम्पदं शीतरश्मि:    भूलाभं भूमिपुत्र:सकलगुणयुतां वाग्विभूतिं च सौम्य:।।  सौभाग्यं देवमन्त्री रिपुभयशमनं भार्गव:शौर्यमार्की        दीर्घायु:सैंहिकेयो विपुलतरयशा:केतुराचन्द्रतारम्।।

 ನವಗ್ರಹಗಳನ್ನು ಪೂಜಿಸುವುದರಿಂದ ಪ್ರಯೋಜನಗಳು:  

ಸೂರ್ಯಗ್ರಹಾರಾಧನೆಯಿಂದ― ಆರೋಗ್ಯ

ಚಂದ್ರಗ್ರಹ― ಬಹಳವಾದ ಸಂಪತ್ತು

ಅಂಗಾರಕನು―ಭೂಲಾಭ

ಬುಧಗ್ರಹ―ಎಲ್ಲಾ ಒಳ್ಳೆಯ ಗುಣಗಳಿಂದ ಕೂಡಿದ ವಾಗೈಶ್ವರ್ಯ 

ಗರು―ಸೌಭಾಗ್ಯ 

ಶುಕ್ರ―ಶತ್ರುಗಳಿಂದ ಉಂಟಾಗುವ ಭಯವನ್ನು ಶಮನಗೊಳಿಸುವುದು 

ಶನೈಶ್ಚರ―ಶೌರ್ಯ 

ರಾಹು―ದೀರ್ಘಾಯುಷ್ಯ 

ಕೇತು―ವಿವಿಧವಾದ ಯಶಸ್ಸು 

ಹೀಗೆ ನವಗ್ರಹರು  ಪೂಜಾಫಲವನ್ನು ಕೊಡುವರು.                                                              (ವಿವಿಧವಾದ ಯಶಸ್ಸು ಎಂದರೇನು?   ಭಗವದ್ಗೀತೆಯಲ್ಲಿ  ಭಗವಂತ सम्भावितस्य चाकीर्तिर्मरणादतिरिच्यते।।  ಎಂದು ಭಗವದ್ಗೀತೆಯಲ್ಲಿ ಹೇಳಲ್ಪಟ್ಟಿದೆ. ಸಂಭಾವಿತ ವ್ಯಕ್ತಿಗೆ ಬರುವ ಅಕೀರ್ತಿ ಮರಣಕ್ಕಿಂತಲೂ ದೊಡ್ಡದು. ಈ ಯಶಸ್ಸನ್ನು ಎಲ್ಲಿಂದ  ಹೇಗೆ ಗಳಿಸಬಹುದು?    

काव्यं यशसे अर्थकृते शिवेतरक्षतये सद्य:परनिवृत्तये कान्तासंहिततया युजे।                                                         ಕಾವ್ಯಾದಿಗಳನ್ನು,ರಾಮಯಣ,ಮಹಾಭಾರತ ಮೊದಲಾದವುಗಳನ್ನು ಅಧ್ಯಯನ ಮಾಡಿ  ನುಡಿದಂತೆ ನಡೆದರೆ  ಯಶಸ್ಸು, ಸುಜ್ಞಾನ, ಅಮಂಗಳ ನಿವಾರಣೆ, ಸದ್ಯ ಉಂಟಾಗುವ ಬೌದ್ಧಿಕ ಸಂಕಷ್ಟಗಳ ಉಪಶಮನ ಹಾಗೂ ಪತಿಯಾದವನಿಗೆ ಪತ್ನಿಯು ಜಾಗ್ರತಾ ಉದ್ದೇಶದಿಂದ ಹೇಗೆ ಹಿತವಾದ ಮಾತುಗಳನ್ನು ತಿಳಿಸಿ ಮುಂದೆ ಆಗಬಾರದಿರುವುದನ್ನು ತಡೆಯುವಳೋ ಅದೇ ರೀತಿಯಾಗಿ ಕಾವ್ಯಾದಿಗಳ ಅಧ್ಯಯನದ ಪ್ರಯೋಜನವು.ಹೀಗೆ ಅಧ್ಯಯನ ಮಾಡುವ ಬುಧ್ಧಿಯನ್ನು ಕೇತುಗ್ರಹಾರಾಧನೆಯಿಂದ ಕೇತುಗ್ರಹನು ಕರುಣಿಸುವನು.   

                      ಮಾಷ ಅಥವಾ ಉದ್ದಿನಲ್ಲಿ ರಾಹುಗ್ರಹಾರಾಧನೆಯನ್ನು ಮಾಡಿದಾಗ ದೀರ್ಘಾಯುಷ್ಯ ಪ್ರಾಪ್ತಿ ಅಷ್ಟೇ ಅಲ್ಲದೇ ರಾಹುಗ್ರಹ ನಿಮಿತ್ತ ದೋಷನಿವಾರಣೆಯೂ ಆಗುವುದು.ಉದ್ದಿನ ಸೇವನೆಯು ಮಾಂಸಸದೃಶ ಎನ್ನುವರು. ಉದ್ದು ತಿನ್ನುವುದರಿಂದ ಬುದ್ಧಿಯ ಮಟ್ಟ ಹ್ರಸ್ವ ಆಗುವುದಕ್ಕೆ ಒಂದು ಉದಾಹರಣೆ―  ಜ್ನಾನಪ್ರಕರ್ಷತೆ ಹಾಗೂ ತೀಕ್ಷ್ಣಬುದ್ಧಿಯಿಂದ ಕವಿಯು ಕಾವ್ಯರಚನೆಗಳನ್ನು  ಮಾಡುವನು. ಆ ಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದ ಇತರ ಕವಿಗಳು ಗ್ರಂಥಗಳನ್ನು ಸುಟ್ಟು ಭಸ್ಮಮಾಡುವರು.ಇದನ್ನು ತಿಳಿದ ಕವಿಯು ಮರುದಿನವೂ ಕಾವ್ಯರಚನೆಯಲ್ಲಿ ತೊಡಗುವನು.ಆದರೆ ಎಲ್ಲಾ ಇತರ ಕವಿಗಳಿಗೂ ಅರ್ಥ ಆಗುವ ರೀತಿಯಲ್ಲಿ ರಚಿಸಿರುವುದನ್ನು ಮನಗಂಡು ಆ ಅಸದೃಶ ಕವಿಮಹಾಶಯನಲ್ಲಿ ಈ ರೀತಿ ಕೇಳುವರು―ಪ್ರಾರಂಭದ ದಿನಗಳಲ್ಲಿ ನೀವು ರಚಿಸಿರುವ ಯಾವ ಕಾವ್ಯಗಳನ್ನೂ ಅರ್ಥಮಾಡಲಾಗುತ್ತಿರಲಿಲ್ಲ , ಅದಕ್ಕಾಗಿ ಅವುಗಳನ್ನು ನಾಶಮಾಡುತ್ತಿದ್ದೆವು.ಆದರೆ ಇವತ್ತಿನ ನಿಮ್ಮ ಕಾವ್ಯರಚನೆಯು ಬಹಳ ಸುಲಲಿತವಾಗಿ ಅರ್ಥವಾಗುವಂತೆ ರಚಿತವಾಗಿದೆ.ಇದಕ್ಕೇನು ಕಾರಣ? ಎಂದಾಗ ಮಹಾಕವಿ ― शेमुषीमुषमाषमश्नाम्। ಎಂದನು.(ಕೇವಲ श  ಮತ್ತು म ದಿಂದ ವಾಕ್ಯ) ಶೇಮುಷೀ= ಬುದ್ಧಿ , ಮುಷ = ಬುದ್ಧಿಯನ್ನು ಕಡಿಮೆ ಮಾಡುವ, ಮಾಷಮ್ = ಉದ್ದನ್ನು ,ಅಶ್ನಾಮ್ = ತಿಂದೆನು.ಬುದ್ಧಿಯನ್ನು ತಗ್ಗಿಸುವ ಉದ್ದನ್ನು ತಿಂದು ಸುಲಲಿತವಾದ ಕಾವ್ಯ ರಚನೆಯಾಯಿತು ಎಂಬಲ್ಲಿ ಮಾಷವು ಬುದ್ಧಿಯನ್ನು ಕುಂಠಿತಗೊಳಿಸುವುದು―ಎಂಬುದು ಇಲ್ಲಿ ಗಮನಾರ್ಹ.  ಬುದ್ಧಿಯಲ್ಲಿ ಮೂರು ವಿಧ ― तैलबुद्धि, घृतबुद्धि ,मृत्पिण्डबुद्धि ಎಂದು.  ತೈಲಬುದ್ಧಿ ಎಂದರೆ  ಕೆರೆಯಲ್ಲಿ ಹಾಕಿದ ತೈಲಬಿಂದುವು ಕ್ಷಣಮಾತ್ರದಲ್ಲಿ ಕೆರೆನೀರಿನ ಮೇಲೆಲ್ಲಾ  ಚೆನ್ನಾಗಿ ಆವರಿಸುವುದು. ಅಂದರೆ ಒಂದು ವಿಷಯ ಹೇಳಿದ ತಕ್ಷಣ ಯಾರು ಅದರ ಪೂರ್ವಾಪರವನ್ನು ಸಂಪೂರ್ಣವಾಗಿ ತಿಳಿಯುವರೋ ಅವರ ಬುದ್ಧಿ ತೈಲಬುದ್ಧಿ.  ಆದರೆ ತುಪ್ಪದ ಬಿಂದುವನ್ನು ಕೆರೆ ನೀರಿಗೆ ಬಿಟ್ಟಾಗ ಅದು ಅಲ್ಲಿ ಮಾತ್ರ ಅಲ್ಲಲ್ಲಿ ಚದುರುವವು.ಎಂದರೆ ಒಂದು ವಿಷಯ ಹೇಳಿದಾಗ ಅದರ ಬಗ್ಗೆ ಎಲ್ಲಾ ತಿಳಿಯದಿದ್ದರೂ ಸ್ವಲ್ಪ ಮಾತ್ರ ತಿಳಿಯುವನು.ಇಂಥಹವರ ಬುದ್ಧಿಯು ಘೃತಬುದ್ಧಿಯು. ಮೃತ್ಪಿಂಡ ಅಂದರೆ ಮಣ್ಣಿನ ಉಂಡೆ ಅಥವಾ ಕಲ್ಲು . ಈ ಕಲ್ಲನ್ನು ಹಸಿಮಣ್ಣಿನ ಗೋಡೆಗೆ ಎಸೆದಾಗ ಆ ಕಲ್ಲು ಗಟ್ಟಿಯಾಗಿ ಅಲ್ಲೇ ಉಳಿಯುವುದು. ಅದೇ ರೀತಿಯಾಗಿ ಒಂದು ವಿಷಯ ಹೇಳಿದಾಗ ಆ ವಿಷಯಮಾತ್ರ ಬುದ್ಧಿಯಲ್ಲಿರುವುದು.ಇಂಥಹವರ ಬುದ್ಧಿಯು ಮೃತ್ಪಿಂಡ ಬುದ್ಧಿ ಎನಿಸುವುದು. ನಾವೆಲ್ಲರೂ ರವಿಗ್ರಹ, ಬುಧಗ್ರಹರಲ್ಲಿ ತೈಲಬುದ್ದಿಯನ್ನು ಕೊಡು ಎಂದು ಪ್ರಾರ್ಥಿಸೋಣ.                                                                 ವೇದೋಕ್ತ ದೀರ್ಘಾಯುಷ್ಯ ಅಂದರೆ 100 ವರ್ಷಗಳು.शतमानं भवति शतायु:पुरुषश्शतेन्द्रिय आयुष्येवेन्द्रिये प्रतितिष्ठति। ಎಂದು ಬೇಡುತ್ತೇವೆ.                                                                               

ಆದರೆ ಜ್ಯೋತಿಷಶಾಸ್ತ್ರದಲ್ಲಿ (ಬೃಹಜ್ಜಾತಕದಲ್ಲಿ)   

        समा:षष्टिर्द्विघ्नी मनुजकरिणां पञ्च च निशा ಇತ್ಯಾದಿಯಾಗಿ ಪ್ರಮುಖ ಪ್ರಾಣಿಗಳ ಆಯುಸ್ಸನ್ನು ಹೇಳಿರುವರು.ಅದರಲ್ಲಿ ಮನುಷ್ಯನಿಗೆ ಮತ್ತು ಆನೆಗೆ ಸಮಾನವಾದ ಆಯು:ಪ್ರಮಾಣ ಹೇಳಿರುವರು.        मनुजकरिणाम्=ಮನುಷ್ಯರಿಗೆ ಮತ್ತು ಆನೆಗಳಿಗೆ      षष्टिर्द्विघ्नी=  2 ರಿಂದ ಗುಣಿಸಿದ 60 =120 ಆಯಿತು. ಅಲ್ಲದೇ 5 ದಿನಗಳು. 120ವರ್ಷಗಳು+5 ದಿನಗಳು ನಮ್ಮ ಮತ್ತು ಆನೆಗಳ ಆಯುಷ್ಯ(समा: ಸಮಾನವು)ಈ ಆಯು:ಪ್ರಮಾಣದಲ್ಲಿ ಒಬ್ಬ ಮನುಷ್ಯ ಒಂದು ಶಾಸ್ತ್ರ ಮಾತ್ರ ಕಲಿಯುವನು ಎಂದು ಪ್ರಾಜ್ಞರ ಅಭಿಪ್ರಾಯ .एकस्मिन् जन्मनि एकमेव शास्त्रम् । ಹೀಗೆ ನಾವೆಲ್ಲರೂ ದೀರ್ಘಾಯುಷ್ಯ ಕೊಡಪ್ಪ ದೇವರೇ.............ಎಂದು ಪ್ರಾರ್ಥಿಸುವ.)


ಪೂಜಾ ಹೋಮಾದಿಗಳಲ್ಲಿ ನವಗ್ರಹಗಳ ಪ್ರಾಧಾನ್ಯತೆ:              

 तेन विना तृणमपि न चलति।   

                                         पूजास्तुतिप्रणतिभिर्मुदिता ग्रहास्ते कुर्वन्त्यनिष्टगतयोऽपि शुभप्रदा स्यु:।।                                                                                  ಮೊದಲಾದ ಶಾಸ್ತ್ರವಾಕ್ಯಗಳಲ್ಲಿ ಹೇಳುವ ವಿಚಾರಗಳು:           

ನವಗ್ರಹಗಳ ಹೊರತಾಗಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು.ನವಗ್ರಹಗಳ ಅಧೀನದಲ್ಲೇ ಮನುಷ್ಯರ ದಿನಚರಿ.ನವಗ್ರಹಗಳ ಪೂಜೆ ಮಾಡುವುದರಿಂದ,ಸ್ತೋತ್ರಮಾಡುವುದರಿಂದ(ಹೊಗಳುವುದರಿಂದ) (स्तुति=स्तुञ् स्तुतौ),ನಮಸ್ಕಾರ ಮಾಡುವುದರಿಂದ(प्रणतिभि:=णमु प्रह्वत्वे शब्दे च)ಸಂತೋಷಗೊಂಡಂಥಹ ಗ್ರಹಗಳು (ಒಂದು ವೇಳೆ ನಮ್ಮ ಜಾತಕ ಪ್ರಕಾರ ಶುಭೇತರ ಫಲಕೊಡುವಲ್ಲಿ)ಅನಿಷ್ಟಗತಿಕರಾದರೂ ಬೇಕಾದಷ್ಟು  ಒಳ್ಳೆಯದನ್ನೇ ಮಾಡುತ್ತವೆ.(प्रकृष्टेण ददाति इति प्रदा:)                                                                                           

ನವಗ್ರಹಗಳನ್ನು ಪೂಜಿಸಲು ಸಲಭೋಪಾಯವನ್ನು ನಮ್ಮ, ಋಷಿಮುನಿಗಳು ಸಾಕ್ಷಾತ್ಕರಿಸಿ ಅದರಂತೆ ನಾವು ಇಂದು ಆಚರಿಸಿಕೊಂಡು ಬರುತ್ತಿದ್ದೇವೆ. ಗೋಧಿಯಲ್ಲಿ ಸೂರ್ಯಗ್ರಹ,ಭತ್ತದಲ್ಲಿ ಚಂದ್ರಗ್ರಹ,ತೊಗರಿಯಲ್ಲಿ ಅಂಗಾರಕಗ್ರಹ, ಹೆಸರುಕಾಳಲ್ಲಿ ಬುಧಗ್ರಹ,ಕಡಲೆಯಲ್ಲಿ ಬೃಹಸ್ಪತಿಗ್ರಹ,ಅವರೆಯಲ್ಲಿ ಶುಕ್ರಗ್ರಹ,ಎಳ್ಳಿನಲ್ಲಿ ಶನೈಶ್ಚರಗ್ರಹ,ಉದ್ದಿನಲ್ಲಿ(ಮಾಷ)ರಾಹುಗ್ರಹ,ಹುರುಳಿಯಲ್ಲಿ ಕೇತುಗ್ರಹ―ಈ ರೀತಿಯಾಗಿ ಪ್ರತಿಯೊಂದು ಗ್ರಹಗಳ ಸಾನ್ನಿಧ್ಯವನ್ನು ಮೇಲೆ ತಿಳಿಸಿದ ಧಾನ್ಯಗಳಲ್ಲಿ ಋಷಿಮುನಿಗಳು ಕಂಡುಕೊಂಡಿರುವರು.

               ಈ ರೀತಿಯಾಗಿ ಪೂರ್ವಾದಿ 9 ದಿಕ್ಕುಗಳಲ್ಲಿ ನವಗ್ರಹಧಾನ್ಯಗಳನ್ನಿಟ್ಟು ಶಾಸ್ತ್ರಬದ್ಧವಾಗಿ ಪೂಜಿಸಿದಲ್ಲಿ (ಅವರವರ ಪೂರ್ವಾರ್ಜಿತ ಕರ್ಮಗಳ ಅಂದರೆ ಪಾಪ ಪುಣ್ಯಗಳ  ಲೆಕ್ಕಾಚಾರಕ್ಕೆ ಸರಿಯಾಗಿ)ನವಗ್ರಹಗಳ ಕೃಪೆಗೆ ಪಾತ್ರರಾಗಿ ಸಂತೋಷವನ್ನನುಭವಿಸುವರು.


वातश्लेश्मविकारपादविहतिं चापत्तितन्द्रीश्रमान्        भ्रान्तिं कुक्षिरुगन्तरुष्णभृतकध्वंसं च पार्श्वाहतिम् ।  भार्यापुत्रविपत्तिमङ्गविहतिं हृत्तापमर्कात्मजो                वृक्षाश्माक्षतिमाहकश्मलगणै: पीडां पिशाचादिभि:।।    

                  ಶನಿಯು ಅನಿಷ್ಟಕಾರಕನಾಗಿದ್ದರೆ ವಾತರೋಗ,ಕಫವಿಕಾರ,ಪಾದಾಘಾತ,ಆಲಸ್ಯ,ಶ್ರಮ,ಚಿತ್ತಭ್ರಮಣೆ,ಉದರರೋಗ,ಅಂತರುಷ್ಣತೆ,ಕೆಲಸಗಾರರ ಹಾನಿ,ಪಾರ್ಶ್ವವಾಯು ಬಡಿತ,ಮಡದಿ ಮಕ್ಕಳಿಗೆ ಆಪತ್ತು,ಅಂಗಾವಯವಹಾನಿ,ಹೃದಯವಿದ್ರಾವಕ ಘಟನೆಗಳು,ಹೃದ್ರೋಗ,ಮರ,ಕಲ್ಲು,ಮುಂತಾದವುಗಳಿಂದ ಘಾಸಿಗೊಳ್ಳುವುದು,ಕಶ್ಮಲ,ನೀಚಗಣ,ಪಿಶಾಚಗಣ ಇತ್ಯಾದಿಗಳಿಂದ ಪೀಡೆ―ಈ ರೀತಿಯ ಫಲಗಳು.


ಹೋರಾಶಾಸ್ತ್ರದ ವ್ಯವಹಾರ ಜ್ಞಾನಾರ್ಥವಾಗಿ ಮೇಷಾದಿ ದ್ವಾದಶ ರಾಶಿಗಳು, ಕಾಲಪುರುಷನ ಅಂಗವಿಭಾಗಾದಿ ಸ್ಥಾನಗಳು ಮತ್ತು ಅದರ ಪ್ರಯೋಜನಗಳು.                                                                     

कालाङ्गानि वराङ्गमाननमुरो हृत्क्रोडवासोभृतो ।            वस्तिर्व्यञ्जनमूरुजानुयुगले जङ्घे ततोऽङ्घ्रिद्वयम् ।।    मेषाश्विप्रथमानवर्क्षचरणाश्चक्रस्थिता राशयो।              राशिक्षेत्रगृहर्क्षभानिभवनं चैकार्थसम्प्रत्यया: ।। 

                       (27 ನಕ್ಷತ್ರಗಳು.ಪ್ರತಿಯೊಂದು ನಕ್ಷತ್ರಗಳಿಗೂ 4 ಚರಣಗಳು. 27✘4=108 ಚರಣಗಳು. ಇವುಗಳು ಮೇಷಾದಿ 12 ರಾಶಿಗಳಿಗೆ ವಿಭಾಗವಾಗುವುದು.ಪ್ರತಿ ರಾಶಿಗೂ 9 ಚರಣಗಳು.(12✘9=108).  ಈ ಪ್ರಕಾರ 27 ನಕ್ಷತ್ರ ಚಕ್ರವು 12  ರಾಶಿಗಳಾಗಿರುವವು. ಈ ನಕ್ಷತ್ರ ಮಂಡಲಗಳು ವರ್ತುಲಾಕಾರವಾಗಿ ಭೂಭಾಗವನ್ನಾವರಿಸಿಕೊಂಡು ಇರುವುದರಿಂದ ಜ್ಯೋತಿಶ್ಚಕ್ರ ಅಥವಾ ಖಗೋಲವೆಂದು ಹೆಸರು.ಈ ನಕ್ಷತ್ರಗಳು ಭೂಮಂಡಲಕ್ಕೆ ಪ್ರದಕ್ಷಿಣೆ ಮಾಡುತ್ತಾ ಪಶ್ಚಿಮದಿಕ್ಕಿಗೆ ತಮ್ಮ ಗತಿಯನ್ನು ಮುಂದುವರಿಸುವುವು.ಅಶ್ವಿನೀ ಮೊದಲಾಗಿ ಒಂದರ ಕೆಳಗೊಂದು ಉದಯಿಸುತ್ತವೆ.ಈ ನಕ್ಷತ್ರಗಳು ಉದಯಿಸುವಾಗ ಮೊದಲು ಅಶ್ವಿನೀ ನಕ್ಷತ್ರದ 1 ನೆಯ ಚರಣವು, ಅನಂತರ ಕ್ರಮವಾಗಿ 2―3―4 ನೆಯ ಚರಣಗಳು ಉದಯಿಸಿ ಅನಂತರ ಭರಣೀ ನಕ್ಷತ್ರದ 1 ನೆಯ ಚರಣ ಉದಯವಾಗುತ್ತದೆ. ಈ ನಕ್ಷತ್ರಗಳು ಭೂಮಿಯ ಸುತ್ತಲೂ ವೃತ್ತ ರೂಪವಾಗಿ 360 ಭಾಗಗಳಿಂದ ಸುತ್ತಿಕೊಂಡು ಇದೆ.ಯಾವಾಗಲೂ 180 ಭಾಗಗಳೇ ದೃಶ್ಯಾರ್ಧ ಚಕ್ರವಾಗಿಯೂ ಉಳಿದ 180 ಭಾಗಗಳು ಅದೃಶ್ಯಾರ್ಧ ಚಕ್ರವಾಗಿಯೂ ಇರುತ್ತದೆ.ಭೂಭಾಗದ ಮೇಲೆ ಇರುವವರಿಗೆ ಯಾವಾಗಲೂ 27 ನಕ್ಷತ್ರಗಳು ಏಕಕಾಲದಲ್ಲಿ ಕಾಣಬರುವುದಿಲ್ಲ.ಅಶ್ವಿನೀ ನಕ್ಷತ್ರ 1 ನೆಯ ಚರಣ ಉದಯದಲ್ಲಿರುವಾಗ ಚಿತ್ತಾ ನಕ್ಷತ್ರದ 3 ನೆಯ ಚರಣವು ಅಸ್ತದಲ್ಲಿರುತ್ತದೆ. ದೃಶ್ಯಾರ್ಧ ಚಕ್ರ ಅಂದರೆ 180 ಭಾಗದಲ್ಲಿ  ಮಧ್ಯ ಭಾಗವಾದ 90 ನೆಯ ಭಾಗದಲ್ಲಿ ನಿಂತಿರುವವನಿಗೆ ಎರಡೂ ಕಡೆಯಲ್ಲೂ 90 ಭಾಗಗಳು ಕಾಣಬರುತ್ತವೆ. ಉದಾಹರಣೆಗೆ ವೃಷಭರಾಶಿಯಲ್ಲಿ 15 ನೆಯ ಭಾಗ ಉದಯದಲ್ಲಿ ಪೂರ್ವದಲ್ಲಿರುವಾಗ, ವೃಶ್ಚಿಕ ರಾಶಿಯ 15 ನೆಯ ಭಾಗ ಪಶ್ಚಿಮದಲ್ಲಿ ಅಸ್ತದಲ್ಲಿಯೂ, ಸಿಂಹ ರಾಶಿಯ 15 ನೆಯ ಭಾಗ ಕೆಳಭಾಗದಲ್ಲಿಯೂ(ಪಾತಾಳದಲ್ಲಿಯೂ) ,ಕುಂಭರಾಶಿಯ 15 ನೆಯ ಭಾಗ ಉಚ್ಚದಲ್ಲಿ ಅಂದರೆ ಅಂತರಿಕ್ಷದ ಮಧ್ಯ ಭಾಗದಲ್ಲಿಯೂ ಇರುತ್ತದೆ.                                                                                ಈ ಜ್ಯೋತಿಶ್ಚಕ್ರದ ಪರಿಣಾಮವೇನೆಂದರೆ  ―                         60 ವಿಕಲೆಗಳಿಗೆ =1 ಕಲೆ ,   60 ಕಲೆಗಳಿಗೆ = 1 ಭಾಗ , 30 ಭಾಗಗಳಿಗೆ 1 ರಾಶಿ, 12 ರಾಶಿಗಳಿಗೆ 1 ಚಕ್ರ ಎಂದೂ, ಇಂಗ್ಲಿಷ್ ವೃತ್ತದ ಪ್ರಮಾಣ ಸಹ ಇದೇ ರೀತಿಯಾಗಿರುವುದು.   60 ಸೆಕೆಂಡ್=1 ಮಿನಿಟ್, 60 ಮಿನಿಟ್ 1 ಡಿಗ್ರಿ , 360 ಡಿಗ್ರಿಗಳಿಗೆ 1 ವೃತ್ತ ಅಥವಾ ಸರ್ಕಲ್.                                                                                              

                 ಸಿದ್ಧಾಂತ ಶಾಸ್ತ್ರದ ಪ್ರಕಾರ 21600 ಕಲೆಗೆ 1 ವೃತ್ತ . ಇದರಲ್ಲಿ ಅಶ್ವಿನೀ ಆದಿಯಾಗಿ 27 ನಕ್ಷತ್ರಕ್ಕೆ ಪ್ರತಿನಕ್ಷತ್ರಕ್ಕೆ 801 ಕಲಾ ಪ್ರಕಾರ 27✘300=21600 ಆಗುತ್ತದೆ. ಈ ಸಂಖ್ಯೆಯನ್ನು ವಿಕಲೆಯನ್ನಾಗಿ ಮಾಡಲು 21600✘60=1296000 ಆಗುವುದು. ಈ ಭ ಚಕ್ರವನ್ನು ಸೂರ್ಯಾದಿ 9 ಗ್ರಹಗಳು ಅಪ್ರದಕ್ಷಿಣವಾಗಿ,ಪೂರ್ವದಿಕ್ಕಿಗೆ ಪ್ರತಿದಿನವೂ ಸಂಚರಿಸಿ ಭೋಗಿಸುವರು.ಇದು ಗ್ರಹಗಳಿಗೆ ಸರಿಯಾದ ಗತಿಯಾಗಿರುವುದು ಎಂದು ಸಿದ್ಧಾಂತಜ್ಞರ ಮತ.ಈ ಪ್ರಕಾರ ಪ್ರತಿದಿನ ಭೋಗಿಸುವುದರಿಂದ ಸೂರ್ಯಾದಿ  ಗ್ರಹಗಳಿಗೆ 1 ಸಾರಿ ಭ ಚಕ್ರವನ್ನು ಸುತ್ತಿ ಅಶ್ವಿನೀ ನಕ್ಷತ್ರದ 1 ನೆಯ ಕಲೆಗೆ ಬರುವುದಕ್ಕೆ ಬೇಕಾದ ಸಂವತ್ಸರ,ಮಾಸ,ದಿವಸಾದಿಗಳನ್ನು ಸಪ್ರಮಾಣವಾಗಿ ಮುಂದೆ ತಿಳಿಸುವೆ.                                                                 ರಾಶಿಗೆ ಇರುವ ಪರ್ಯಾಯ ನಾಮಗಳು―ಕ್ಷೇತ್ರಂ,  ಗೃಹಂ,ಋಕ್ಷಂ,ರಾಶಿ: , ಭವನಮ್


ಮೇಷಾದಿ 12 ರಾಶಿಗಳು ಕಾಲಪುರುಷನ ಅವಯವಗಳು ಆಗುವವು:-  

                                                                   ಮೇಷರಾಶಿಯು ಕಾಲಪುರುಷನ = ಶಿರಸ್ಸು(ವರಾಂಗ=ವರ ಅಂದರೆ ಉತ್ತಮ ಎಂದು.उत्तमाङ्गं शिर:शीर्षम्―ಅಮರಕೋಶ),ವೃಷಭ=ಮುಖ, ಮಿಥುನ =ಕುತ್ತಿಗೆ ,  ಕಟಕ = ಕೈ ಸಹಿತವಾದ ದ್ವಿಭುಜ ಭಾಗ,  ಸಿಂಹ = ಹೃದಯ , ಕನ್ಯಾ = ಹೊಟ್ಟೆ , ತುಲಾ = ನಾಭಿಯ ಕೆಳಭಾಗ(वस्तिर्नाभेरधो द्वयो:―ಅಮರಕೋಶ― ಅಂದರೆ ನಾಭಿ ಮತ್ತು ನಾಭಿಯ ಕೆಳಭಾಗ) ,ವೃಶ್ಚಿಕ = ಗುಹ್ಯಪ್ರದೇಶ, ಧನು = ತೊಡೆಗಳು, ಮಕರ =ಕಾಲಮಧ್ಯದ ಗಂಟು(ಮೊಣಕಾಲು) , ಕುಂಭ = ಮಧ್ಯ ಗಂಟಿನ ಕೆಳಗಡೆ― ಪಾದದ ಮೇಲ್ಗಡೆಯ ಭಾಗ,  ಮೀನ =ಪಾದಗಳು. ಹೀಗೆ ಕಾಲಪುರುಷನ ಅವಯವಗಳಲ್ಲಿ ರಾಶಿಸ್ಥಾನಗಳು.                     

ಕಾಲಪುರುಷನ ಅವಯವಗಳಲ್ಲಿ ರಾಶಿಸ್ಥಾನಗಳ  ಪ್ರಯೋಜನಗಳು:―   

ಜನ್ಮಕಾಲದಲ್ಲಿ ಪಾಪಗ್ರಹಗಳಿಂದ ಆಕ್ರಾಂತವಾದ ರಾಶಿ ಕಾಲಪುರುಷನ ಯಾವ ಅಂಗವಾಗಿದೆಯೋ ಆ ಅಂಗದಲ್ಲಿ  (ಇತರ ಗ್ರಹರಾಶಿಸ್ಥಿತಿಗತಿಯ ಬಲಾಬಲ ವಿವೇಚಿಸಿ)ಅಂಗಹ್ರಸ್ವ ಅಥವಾ ಲೋಪ ದೋಷ ವ್ರಣಗಳನ್ನು ಹೇಳುವುದು. ಶುಭಗ್ರಹಗಳಿಂದ ಆಕ್ರಾಂತವಾದ ರಾಶಿಯು ಕಾಲಪುರುಷನ ಯಾವ ಅಂಗವಾಗಿದೆಯೋ  ಆ ಭಾಗದಲ್ಲಿ(ಇತರ ಎಲ್ಲಾ ಸ್ಥಿತಿಗತಿ ಬಲಾಬಲ ಪರಾಮರ್ಶಿಸಿ) ಪುಷ್ಟಿಯನ್ನು ಹೇಳುವುದು, ತಿಲ , ಯವ, ಮಚ್ಚೆ  ಮುಂತಾದ ಲಕ್ಷಣ ಚಿಹ್ನೆಗಳನ್ನು ಹೇಳುವುದು.


ಸ್ವರ್ಗ ನರಕ ನಿರ್ಣಯ                                                                                                            देवेज्ये कर्मराशिस्थे व्ययराशिगतेऽपि वा ।                  शुभग्रहेण सन्दृष्टे स्वर्गप्राप्तिर्नसंशय:।।                                                                                       ಗುರುವು ದಶಮದಲ್ಲೋ ವ್ಯಯದಲ್ಲೋ ಇದ್ದು ಶುಭಗ್ರಹರ ದೃಷ್ಟಿ ಇದ್ದರೆ ಮರಣಾನಂತರ ಸ್ವರ್ಗ ಪ್ರಾಪ್ತಿಯು.ಇದರಲ್ಲಿ ಸಂಶಯವಿಲ್ಲ.

व्ययेशे पापमध्यस्थे नरके पतति ध्रुवम् ।                तदीशे शुभमध्यस्थे स्वर्गलोके महीयते ।।                                                                                                  ವ್ಯಯಾಧಿಪತಿಯು ಪಾಪರ ಮಧ್ಯದಲ್ಲಿದ್ದರೆ ನಿಶ್ಚಯವಾಗಿಯು ನರಕಲೋಕದಲ್ಲಿ ಬೀಳುವನು.ವ್ಯಯೇಶನು ಶುಭರ ಮಧ್ಯದಲ್ಲಿದ್ದರೆ ಸ್ವರ್ಗ ಲೋಕದ ಪ್ರಾಪ್ತಿಯು.(ವ್ಯಯೇಶನು ಪಾಪಯುತನಾಗಿದ್ದರೆ, ವ್ಯಯದಲ್ಲಿ ಪಾಪನಿದ್ದರೆ, ವ್ಯಯಕ್ಕೆ ಪಾಪದೃಷ್ಟಿ ಇದ್ದರೆ, ವ್ಯಯೇಶನು ನೀಚನಾಗಿದ್ದರೆ, ವ್ಯಯದಲ್ಲಿ ರಾಹು ಕೇತು ಶನಿ ಕುಜರಿದ್ದರೆ ಅಥವಾ ಇಬ್ಬರ್ಯಾರಾದರೂ ವ್ಯಯದಲ್ಲಿದ್ದರೆ ಇವೆಲ್ಲ ನರಕಪತನ ಯೋಗಗಳು ಎಂದಿದ್ದಾರೆ.


होरेत्यहोरात्रविकल्पमेके वाञ्छन्ति पूर्वापरवर्णलोपात्।  कर्मार्जितं पूर्वभवेसदादि यत्तस्य पक्तिं समभिव्यनक्ति।।      ಪೂರ್ವ ವರ್ಣವಾದ ಅಕಾರವನ್ನು ಮತ್ತು ಅಂತ್ಯದ ತ್ರ  ಲೋಪ ಮಾಡಿದರೆ ಹೋರಾ ಎಂಬುದಾಗಿ ಅಹೋರಾತ್ರ ವಿಕಲ್ಪವನ್ನು ಹೇಳುವರು.ಹೋರಾಶಾಸ್ತ್ರವು(ಜ್ಯೋತಿಶ್ಶಾಸ್ತ್ರವು) ಭೂತವರ್ತಮಾನಭವಿಷ್ಯತ್ ಈ ಮೂರೂ ಕಾಲಗಳಲ್ಲಿ ನಡೆಯುವ ಶುಭಾಶುಭಮಿಶ್ರವಾದ ಕರ್ಮಫಲವನ್ನು ತಿಳಿಯಪಡಿಸುವುದು.                                                                                यदुपचितमन्यजन्मनि शुभाशुभं तस्य जन्मन:पक्तिम्।    व्यञ्जयति शास्त्रमेतत्तमसि द्रव्याणि दीप इव।।                                                                           ಹೋರಾ ಶಾಸ್ತ್ರವೆಂಬ ಜ್ಞಾನಚಕ್ಷುಸ್ಸಿನಿಂದ ಪೂರ್ವಜನ್ಮ ,ಇಹಜನ್ಮ ಮತ್ತು ಪರಜನ್ಮದ ಫಲವನ್ನು ಕತ್ತಲಲ್ಲಿರುವ ವಸ್ತುಗಳನ್ನು ದೀಪದಿಂದ ತಿಳಿಯುವಂತೆ ತಿಳಿಯಬಹುದು.

            वेदस्य चक्षु:किल शास्त्रमेतत्।  

 ಜ್ಯೋತಿಶ್ಶಾಸ್ತ್ರವನ್ನು ವೇದರಾಶಿಗಳ ಕಣ್ಣು ಎಂದು ಹೇಳಿರುವರು.ವೇದಾಂಗಗಳು 6.                                                                    

शिक्षा व्याकरणं छन्दो निरुक्तं ज्यौतिषं तथा।       कल्पश्चेति षडङ्गानि वेदस्याहुर्ममनीषिण: ।। 

ಜ್ಯೋತಿಷಶಾಸ್ತ್ರವು ವೇದಾಂಗವೇ ಆದರೂ ವೇದಗಳ ಕಣ್ಣು ಎನ್ನುವುದು ಬಹಳ ಸ್ವಾರಸ್ಯಕರವಾದ ವಿಚಾರವಾಗಿದೆ.


राशीनामुदयो लग्नं ते तु मेषवृषादय:।                      ग्रहयोगवियोगाभ्यां फलं चिन्त्यं शुभाशुभम्।।                                                                               ಪೂರ್ವ ಕ್ಷಿತಿಜದಲ್ಲಿ ಮೇಷಾದಿ ರಾಶಿಗಳು ಉದಿಸುತ್ತಿರುತ್ತವೆ.ಜನ್ಮ ಪಡೆಯುವ ಪ್ರತಿಯೊಬ್ಬ ಮಾನವನ ಜನನ ಕಾಲದಲ್ಲಿ ಉದಿಸಿದ ಲಗ್ನದಿಂದ ಮತ್ತು ಚಲಿಸುತ್ತಿರುವ ಗ್ರಹರ ಯೋಗ ವಿಯೋಗಾದಿಗಳಿಂದ ಶುಭಾಶುಭ ಫಲಚಿಂತನೆಯನ್ನು ಜೀವಿತಕಾಲದಲ್ಲಿ ಮಾಡಿಕೊಳ್ಳುವುದು.                                                                                                              लगति इति लग्नम्।(लगि गतौ धातु:)                                                                                     ರಾಶಿಯಿಂದ ರಾಶಿಗೆ ಕ್ರಮಿಸುವುದನ್ನು लग्नम् ಎನ್ನುವುದು.

तद्वादशविभागस्तु तुल्या मेषादिसंज्ञका:।                    प्रसिद्धा राशयस्सन्ति ग्रहास्त्वर्कादिसंज्ञका:।।                     ನಕ್ಞತ್ರಪಥದಲ್ಲಿರುವ 27 ವಿಭಾಗಗಳನ್ನು ಮೇಷ,ವೃಷಭ,ಮಿಥುನ,ಕಟಕ,ಸಿಂಹ,ಕನ್ಯಾ,ತುಲಾ,ವೃಶ್ಚಿಕ,ಧನು,ಮಕರ,ಕುಂಭ,ಮೀನ ಈ12 ಹೆಸರುಗಳ ಅನ್ವರ್ಥಕ ಆಕೃತಿಯಂತೆ ಕಂಡುಹಿಡಿದು ಮೇಷಾದಿ 12 ರಾಶಿಗಳನ್ನು ಕಲ್ಪಿಸಿದ್ದಾರೆ.ಇವುಗಳು ಚಲಿಸದೆ ಇರುವ 27 ನಕ್ಷತ್ರಪುಂಜಗಳೂ ಮೇಷಾದಿ 12 ರಾಶಿಪುಂಜಗಳೂ ಆಗಿವೆ.ಚಲಿಸುವ ಬಿಂಬಗಳಿಗೆ ರವ್ಯಾದಿ ಸಂಜ್ಞೆಗಳು.


तानि नक्षत्रनामानि स्थिरस्थानानि यानि वै।                  गच्छन्तो यानि गृह्णन्ति सततं ये तु ते ग्रहा:।।                                                                                        ಚಲನೆ ಇಲ್ಲದೆ ಸ್ಥಿರವಾಗಿರುವವುಗಳು ಅಶ್ವಿನ್ಯಾದಿ 27  ನಕ್ಷತ್ರಪುಂಜಗಳು.ಉಳಿದ ಕೆಲವು ಚಲಿಸುವ            ಜ್ಯೋತಿರ್ಬಿಂಬಗಳು ಗ್ರಹಗಳು.ಈ ಗ್ರಹಗಳು ಚಲಿಸುತ್ತಾ ನಕ್ಷತ್ರಗಳನ್ನು ಸದಾ ಹಿಡಿದು(ಹಿಡಿದಂತೆ ತೋರುವುದು ಮಾತ್ರ)ಕ್ರಮಿಸುತ್ತಾ ಮುಂದುವರಿಯುತ್ತಿರುತ್ತಾರೆ.                                   

 न क्षरति न गच्छति इति नक्षत्रम्।                                                                                           ನಕ್ಷತ್ರಗಳು ಚಲಿಸುವುದಿಲ್ಲವೆಂದು ಪೂರ್ವಾಚಾರ್ಯರುಗಳ ಮತವಾಗಿದೆ.ಕುಜಾದಿ ಗ್ರಹಗಳು ತಮ್ಮ ತಮ್ಮ ಅಕ್ಷದಲ್ಲಿ ಸಂಚರಿಸುವಾಗ ಕ್ರಾಂತಿವೃತ್ತದ ನಕ್ಷತ್ರ ಪಥದಲ್ಲಿ ನಕ್ಷತ್ರಗಳು ಸಂಚರಿಸುವಂತೆ ತೋರುತ್ತಿರುತ್ತವೆ.

No comments:

Post a Comment